Tuesday, June 26, 2012

ಗುಂಡನ ಉತ್ತರ


EgÀĪÉAiÀÄ£ÀÄß PÉÆ®ÄèªÀÅzÀÄ ºÉÃUÉ JAzÀÄ «ªÀj¹.
PÁgÀzÀ ¥ÀÅrAiÀÄ£ÀÄß ¸ÀPÀÌgÉAiÀÄ eÉÆvÉ PÀ°¹, EgÀĪÉAiÀÄ UÀÆr£À ªÀÄÄAzÉ Er.
EgÀÄªÉ CzÀ£ÀÄß wAzÀ £ÀAvÀgÀ ¤ÃjUÁV mÁAPï ºÀwÛgÀ §gÀĪÀÅzÀÄ, DUÀ CzÀ£ÀÄß ¤ÃjUÉ vÀ½î.
CzÀÄ MtV¹PÉÆ¼Àî®Ä ¨ÉAQAiÀÄ §½ §AzÉÆqÀ£É, ¨ÉAQAiÀÄ°è ¨ÁA¨ï ºÁQ.
CzÀÄ UÁAiÀÄUÉÆAqÀÄ D¸ÀàvÉæAiÀÄ°è ªÀÄ®VgÀĪÁUÀ, CzÀgÀ DQìd£ï ¥À¬Ä¥ï vÉUÉzÀÄ EgÀĪÉAiÀÄ£ÀÄß PÉÆ°è.

Thursday, May 10, 2012

ಸರ್ ಪ್ರೈಸ್


ಡಾಕ್ಟರ್: ಕಂಗ್ರಾಟ್ಸ್ ಗುಂಡ, ನೀನು ತಂದೆ ಆಗ್ತಾ ಇದ್ಯ.
ಗುಂಡ: ನನ್ನ ಹೆಂಡ್ತಿಗೆ ಹೇಳ್ಬೇಡಿ, ನಾನು ಅವಳಿಗೆ ಸರ್ ಪ್ರೈಸ್ ಕೊಡ್ಬೇಕು.

Sunday, May 6, 2012

ಗುಂಡನ ಪುಟ ಲೆಕ್ಕಾಚಾರ

ಟೀಚರ್: ಮೊಘಲರು ಎಲ್ಲಿಂದ ಎಲ್ಲಿಯವರಿಗೆ ಆಳಿದರು?
ಗುಂಡ: ಮೊಘಲರು ಪುಟ ೧೬ರಿಂದ ೨೮ರವರೆಗೆ ಆಳಿದರು.

Sunday, January 29, 2012

ಕೇಶ ರಹಸ್ಯ


ಮಗು: ಅಮ್ಮ, ಗಾಂಧೀಜಿ ತಲೆ ಮೇಲ್ ಯಾಕ್ ಕೂದಲಿರಲಿಲ್ಲ?
ತಾಯಿ: ಗಾಂಧೀಜಿ ಯಾವಾಗ್ಲು ಸತ್ಯನೇ ಹೇಳ್ತಿದ್ರು ಅದಕ್ಕೇ ಅವರ ತಲೆ ಮೇಲ್ ಕೂದ್ಲಿರ್ಲಿಲ್ಲ...
ಮಗು: ಓ ಅದಕ್ಕೇ ಹುಡುಗೀರಿಗೆ ಅಷ್ಟೋಂದು ಉದ್ದ ಕೂದಲು..

ಪೆನ್ ಐತಾ?


ಇದಕ್ಕಿಂತ ಹೆಚ್ಚು ಪೀಡಿಸಲು ಸಾಧ್ಯವಿಲ್ಲ
ಹುಡುಗ: ಪೆನ್ ಐತಾ?
ಹುಡುಗಿ: ಇಲ್ಲಾ..
ಹುಡುಗ: ಪೆನ್ ಐತಾ?
ಹುಡುಗಿ: ಇಲ್ಲಾ ಅಂತ ಹೆಳುದ್ನಲ್ಲ..
ಹುಡುಗ: ಅಲ್ಲಾ.. ನಾನ್ ಪೆನ್ ಐತಾ ಅಂತಾ ಕೇಳ್ದೆ..
ಹುಡುಗಿ: ಇನ್ನೊಂದ್ಸತಿ ಪೆನ್ ಐತಾ ಅಂತ ಕೇಳುದ್ರೆ ಸುತ್ತಿಗೆ ತಕೊಂಡ್ ತಲೆ ಮೇಲ್ ಹೊಡಿತೀನಿ..
{ಸ್ವಲ್ಪ ಹೊತ್ತು ಬಿಟ್ಟು}
ಹುಡುಗ: ಸುತ್ತಿಗೆ ಐತಾ?
ಹುಡುಗಿ: ಇಲ್ಲಾ...
ಹುಡುಗ: ಹಂಗಾರ್ ಪೆನ್ ಐತಾ..

Friday, January 27, 2012

ಹೆಂಡತಿಯಿಂದ ಕಾಪಾಡಿ


ಪುರಾಣ ಹೇಳುತ್ತದೆ
ಸತಿ ಸಾವಿತ್ರಿ ಯಮನೊಂದಿಗೆ ಹೋರಾಡಿ
ತನ್ನ ಗಂಡನನ್ನು ವಾಪಾಸ್ ತಂದಳು

ಇದರ ನೀತಿ:
ನಿಮ್ಮ ಹೆಂಡತಿಯಿಂದ ನಿಮ್ಮನ್ನು ಕಾಪಾಡಲು ಯಾರಿಗೂ ಸಾಧ್ಯವಿಲ್ಲ, ಯಮನಿಗೂ ಕೂಡ..

ಗೂಬೆ ಮುಂಡೇದು


ನೀವು ನಿಮ್ಮದೇ ಹಾದಿಯಲ್ಲಿ ನಡೆಯಿರಿ
ನೀವು ನಿಮ್ಮದೇ ಶೈಲಿಯಲ್ಲಿ ಮಾತಾಡಿ
ನೀವು ನಿಮ್ಮದೇ ರೀತಿಯಲ್ಲಿ ಜೀವಿಸಿ
ನೀವು ನಿಮ್ಮದೇ ಜನಗಳಿಗೆ ಸಹಾಯ ಮಾಡಿ

ಆಗ ಜನಗಳು ಹೇಳ್ತಾರೆ
ಗೂಬೆ ಮುಂಡೇದು ಯಾರ್ ಮಾತು ಕೇಳಲ್ಲ

ಮುಳುಗಿಸಿ


ಟೀಚರ್: ಯಾರಾದ್ರು ಮೋಸ ಮಾಡಿದ್ರೆ ಏನ್ ಮಾಡ್ಬೇಕು?
ಪುಂಡ: ಅವರನ್ನ ಮೂರ್ ಸಲ ನೀರಲ್ಲಿ ಮುಳುಗಿಸಿ ಎರಡ್ ಸಲ ಮಾತ್ರ ತೆಗೆಯಬೇಕು...

ಚಿಪ್ಸ್


ಇಬ್ಬರು ಪ್ರೇಮಿಗಳು ಚಿಪ್ಸ್ ತಿನ್ನುತಿರಬೇಕಾದರೆ
ಹುಡುಗಿ: ಹೀಗೆ ಒಬ್ಬರನ್ನೊಬ್ಬರು ನೋಡುತ್ತ ಚಿಪ್ಸ್
     ತಿಂತಾ ಇದ್ರೆ ನಿಂಗ್ ಏನನ್ಸುತ್ತೇ?
ಹುಡುಗ: ನಂಗಿಂತ ನೀನೆ ಜಾಸ್ತಿ ತಿಂತಿದ್ಯ ಅನ್ಸುತ್ತೆ....

ವಿರಾಮ ಪತ್ರ


ಹೀಗೊಂದು ವಿರಾಮ ಪತ್ರ

ಇಂದ,
ನಾನು
ನಿನ್ ಡಿಪಾರ್ಟಮೆಂಟು
ನಿನ್ ಕಾಲೇಜು,
ಇದೇ ಊರು

ದಿನಾಂಕ: ಇವತ್ತೇ

ಗೆ,
ನಿಂಗೇ ಮಗನೇ
ಇದೇ ಡಿಪಾರ್ಟಮೆಂಟು
ಇದೇ ಕಾಲೇಜು,
ಇದೇ ಊರು
ವಿಷಯ: ಅದೆಲ್ಲ ಗೊತ್ತಿಲ್ಲ.

ಮಾನ್ಯರೇ,
ನೀನ್ ಏನ್ ಮಾಡ್ತೀಯಾ ಮಾಡ್ಕೋ ಮಗನೇ ನಾನ್ ನಾಳೆ ಕಾಲೇಜಿಗ್ ಬರೋದಿಲ್ಲ ಅಷ್ಟೆ. ಧನ್ಯವಾದಗಳು
ನಿನ್ನ ವಿಧೇಯ
    ಬಸ್ಯ

ಹನಿಗವನಗಳು


ಹುಡುಗರು
ಕಾಲೇಜು ಪರೀಕ್ಷೆಯಲ್ಲಿ
ಕಾಪಿ ಹೊಡಿತಾರೆ
ಪಾಸ್ ಆಗ್ತಾರೆ.
ವಧು ಪರೀಕ್ಷೆಯಲ್ಲಿ
ಕಾಫಿ ಕುಡೀತಾರೆ ವಾ-
ಪಾಸ್ ಹೋಗ್ತಾರೆ

  ಶಾಪಿಂಗ್
ಶಾಪಿಂಗ್ ಮುಗಿಸಿ
ಮರಳುವಾಗ
ಹೆಂಡತಿಯ ಮೊಗದಲ್ಲಿ
ಸಂತೃಪ್ತಿಯ ನಗು
ಗಂಡನ ಕೈಯಲ್ಲಿ
ಬ್ಯಾಗು, ಮಗು.
-ಎಚ್. ದುಂಡಿರಾಜ್

ಶುಭಾರಂಭ


ಗೆಳೆಯರೆ, ಈಗಿನ ಬಿಝಿ ಜೀವನದಲ್ಲಿ ನಗು ಎನ್ನುವುದನ್ನು ನಾವು ಮರೆತಂತಿದೆ... ನಗುವುದರಿಂದ ದೊರಕುವ ಲಾಭ ಬಹಳಷ್ಟು... ಆದ್ದರಿಂದ ಈ ಬ್ಲಾಗಿನಲ್ಲಿ ಹಾಸ್ಯ ಚುಟುಕುಗಳನ್ನು ಪ್ರಕಟಿಸುವ ಉದ್ದೇಶ ಹೊಂದಿದ್ದೇನೆ.. ನಿಮ್ಮ ಬೆಂಬಲ ಬಯಸುತ್ತಿದ್ದೇನೆ.


ನಗುವು ಸಹಜದ ಧರ್ಮ
ನಗಿಸುವುದು ಪರಧರ್ಮ
ನಗಿಸಿದ ಮೇಲೂ ನಗದಿದ್ರೆ
ನಿಮ್ ಕರ್ಮ
                                                                                                      -ಕಾರ್ತಿಕ್